ಸೆಪ್ಟೆಂಬರ್ 4, 2020
ಮನೆ

ಮನೆ ನಿರ್ಮಾಣ : ಭಾಗ 1 – ಪರಿಚಯ

ಸ್ನೇಹಿತರಿಗೆ ಹಂಚಿಕೊಳ್ಳಿ

ಮನೆ ಕಟ್ಟುವದು ಎನ್ನುವದು ಪ್ರತಿಯೊಬ್ಬರ ಕನಸು. ಸಾಲ ಮಾಡಿಯಾದರೂ ಸರಿ ಮನೆ ಕಟ್ಟಬೇಕು ಕೊಳ್ಳಬೇಕು ಅನ್ನುವದು ಅನೇಕ ಜನರ ಹಂಬಲ. ಹಿಂದೆ ಮಣ್ಣಿನ ಗುಡಿಸಲಿನಿಂದ ಆರಂಭವಾಗಿ ಇಂದು ಬಹುಮಹಡಿ ಕಟ್ಟಡ ಕಟ್ಟುವಷ್ಟರ ಮಟ್ಟಿಗೆ ಮನೆ ನಿರ್ಮಾಣದ ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದೆ.

ಇಂದು ಮನೆ ಕಟ್ಟುವ ಪ್ರತಿಹಂತದಲ್ಲಿ ಹಲವು ಬಗೆಯ ಆಯ್ಕೆಗಳು, ನಿರ್ಧಾರಗಳು ತೆಗೆದು ಕೊಳ್ಳಬೇಕು. ನಾನು ನಮ್ಮ ಮನೆ ನಿರ್ಮಾಣದಲ್ಲಿ ಸಮಯದಲ್ಲಿ ಇದಕ್ಕೆ ಸಂಬಂಧಿಸಿದ ಹತ್ತು ಹಲವು ವಿಷಯ ಕಲಿತ ಅನುಭವವನ್ನು ಈ ಲೇಖನಿ  ಸರಣಿ ಮೂಲಕ ಹಂಚಿಕೊಳ್ಳಲಿದ್ದೇನೆ.

ಈ ವಿವರಗಳು ಹೊಸತಾಗಿ ಮನೆ ಅಥವಾ ಕಟ್ಟಡ ಕಟ್ಟುವವರಿಗೆ ಮತ್ತು ಇರುವ ಮನೆ ನವೀಕರಣಗೊಳಿಸಲು ಅನುಕೂಲ ಆಗಬಹುದು ಎನ್ನುವದು ನನ್ನ ಆಶಯ.

ಈ ಲೇಖನ ಸರಣಿಯಲ್ಲಿ ಬ್ಯಾಂಕ ಸಾಲದಿಂದ ಹಿಡಿದು ಮನೆ ಕಟ್ಟುವ ಹಲವು ಹಂತಗಳು ಕೊನೆಗೆ ಗೃಹಪ್ರವೇಶದ ವರೆಗಿನ ಎಲ್ಲ ಹಂತಗಳ ವಿವರ ನೀಡಲು ಪ್ರಯತ್ನಿಸಿದ್ದೇನೆ.
ಇಲ್ಲಿ ನೀಡಲಾಗುವ ಎಲ್ಲ ವಿವರಗಳು ಎಲ್ಲ ಮನೆ ಅಥವಾ ಕಟ್ಟಡಗಳಿಗೆ ಅನ್ವಯವಾಗಿರಬಹುದು ಆರ್ಕಿಟೆಕ್ಟ್ / ಮೇಸ್ತ್ರಿ ಅವರ ಸಲಹೆ ಪಡೆಯಿರಿ. ಇವೆಲ್ಲ ಮಾಹಿತಿಗಾಗಿ ಮಾತ್ರ, ನಿರ್ಮಾಣದ ಸಮಯದಲ್ಲಿ ವೃತ್ತಿಪರರ ಸಲಹೆ ಪಡೆಯಿರಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.