ಸೋನು ನಿಗಮ್ ಎಂದ್ರೆ ನೆನಪಿಗೆ ಬರುವದು ರೊಮ್ಯಾಂಟಿಕ್ ಕನ್ನಡ ಹಾಡುಗಳು. ಒಬ್ಬ ಭಗ್ನ ಪ್ರೇಮಿಯ ಛಿದ್ರಗೊಂಡ ಹೃದಯದ ಆರ್ತನಾದ ಇರಬಹುದು ಅಥವಾ ಹೊಸ ಪ್ರೇಮದಲ್ಲಿ ತೇಲಾಡುತ್ತಿರುವ ನವ ಪ್ರೇಮಿಯ ಖುಷಿಯ ಸಡಗರ ಇರಬಹುದು ಅಥವಾ ಪ್ರೇಮಿಯ ಪ್ರೀತಿ ವ್ಯಕ್ತಪಡಿಸುವಿಕೆ ಎಲ್ಲ ಭಾವನೆಗಳಿಗೆ ಸಂಗೀತದ ಮೂಲಕ ಭಾವನೆ ವ್ಯಕ್ತಪಡಿಸುವದರಲ್ಲಿ ಎತ್ತಿದ ಕೈ.
ಕನ್ನಡ ಗೊತ್ತಿರದಿದ್ದರೂ ಕನ್ನಡ ಹಾಡುಗಳನ್ನು ಕಲಿತು ಅದಕ್ಕೆ ಭಾವ ತುಂಬಿ ಯಾವುದೇ ಉಚ್ಚಾರ ದೋಷವಿಲ್ಲದೆ ಹಾಡುವ ಈ ಗಾಯಕನ ಪರಿಶ್ರಮಕ್ಕೆ ಫಲವಾಗಿ ಇಂದು ಕನ್ನಡಿಗರು ಸೋನು ನಿಗಮ ಹಾಡುಗಳನ್ನು ಕೇಳುತ್ತಾರೆ.
ಜಗತ್ತಿನಾದ್ಯಂತ ಲೈವ್ ಆಗಿ ಹಾಡಿ ಮನರಂಜಿಸುವ ಸೋನು ನಿಗಮ ಎಲ್ಲೆ ಆಗಲಿ ಒಬ್ಬನೇ ಒಬ್ಬ ಕನ್ನಡಿಗ ಇದ್ದರೂ ಕನಿಷ್ಟ ಒಂದೇ ಒಂದು ಲೈನ್ ಕನ್ನಡ ಹಾಡನ್ನು ಹಾಡುತ್ತಾರೆ. ಇದು ಅವರೇ ಹಾಕಿಕೊಂಡಿರುವ ಅಲಿಖಿತ ನಿಯಮ. ಮುಂದಿನ ವಿಡಿಯೋದಲ್ಲಿ ಅವರು ಹಾಗೆ ಮಾಡುತ್ತಿರುವ ಒಂದು ಉದಾಹರಣೆ ನೋಡಬಹುದು. ಇದು ಈ ಪ್ರಖ್ಯಾತ ಹಾಡುಗಾರ ಕನ್ನಡಿಗರು ಇಟ್ಟಿರುವ ಅಭಿಮಾನಕ್ಕೆ ನೀಡುತ್ತಿರುವ ಗೌರವ.
ರೇಡಿಯೋ ಮಿರ್ಚಿ ಸಂದರ್ಶನದಲ್ಲಿ ಕನ್ನಡದ ಹಾಡುಗಳ ಬಗ್ಗೆ ಹೇಳುತ್ತಿರುವ ಸೋನು ನಿಗಮ.

ಸ್ಟುಡಿಯೋದಲ್ಲಿ ಹಾಡುತ್ತಿರುವ ಸೋನುನಿಗಮ್
ಹರಿಯಾಣ ದವರಾದ ಇವರು ಕನ್ನಡದಲ್ಲಿ ನೂರಾರು ಹಾಡನ್ನು ಹೇಳಿದ್ದಾರೆ. ಇವರ ಹಾಡುಗಳಲ್ಲಿ ಆಯ್ದ ಕೆಲವು ಇಲ್ಲಿವೆ.