ಸೆಪ್ಟೆಂಬರ್ 4, 2020
ವೈಷ್ಣೋದೇವಿ ಮಂದಿರ ಒಂದು ನೋಟ

ವೈಷ್ಣೋದೇವಿ ಮಾತೆಯ ಮಡಿಲಲ್ಲಿ – ಪ್ರವಾಸ ವಿವರ

ಸ್ನೇಹಿತರಿಗೆ ಹಂಚಿಕೊಳ್ಳಿ

ಮಾತಾ ರಾಣಿ, ವೈಷ್ಣವಿ ಎಂದೂ ಕರೆಯಲ್ಪಡುವ ವೈಷ್ಣೋದೇವಿಯು ಹಿಂದೂ ದೇವತೆ ಮಹಾಲಕ್ಷ್ಮಿಯ ರೂಪ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಟ್ರಾದಲ್ಲಿ ತ್ರಿಕುಟಾ ಪರ್ವತ ಶ್ರೇಣಿಯ ಮಡಿಲಲ್ಲಿ ಈ ಮಂದಿರ ಇದೆ. ವೈಷ್ಣೋದೇವಿ ಮಾತೆಯು ತನ್ನ ಮಕ್ಕಳನ್ನು ತಾನೇ ಕರೆಯುತ್ತಾಳೆ ಎಂಬುದು ಒಂದು ನಂಬಿಕೆ. ಆಕೆ ಕರೆ ಸಿಕ್ಕ ವ್ಯಕ್ತಿ ತಾನೇ ಆಕೆಯ ನೋಡಲು ಬರುತ್ತಾನೆ. ಆಕೆಯ ಕರೆ ಇಲ್ಲದೆ ಭೇಟಿ ಕಷ್ಟ ಎಂಬುದು ಒಂದು ನಂಬಿಕೆ.

ದೆಹಲಿಯಿಂದ ಉತ್ತರಕ್ಕೆ ಕರ್ನಾಲು, ಪಾಣಿಪಟ್, ಜಲಂಧರ, ಲೂದಿಯಾನ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮೂಲಕ ಸರಿ ಸುಮಾರು ೧೪ ಗಂಟೆಯ ಡ್ರೈವಿಂಗ್ ನಂತರ ಕಟ್ರಾ ಅನ್ನುವ ಪ್ರದೇಶ ಬರುತ್ತೆ. ಈ ಕಟ್ರಾದಿಂದ ೧೪ ಕಿಮಿ ಗುಡ್ಡವನ್ನು ಕಾಲ್ನಡಿಗೆ ಅಥವಾ ಕುದುರೆ ಸಹಾಯದಿಂದ ಹತ್ತಿಳಿದರೆ ಸಿಗುವದು ಮಾತಾ ವೈಷ್ಣೋದೇವಿಯ ಮಂದಿರ.

ಜಮ್ಮುಗಿಂತ ಮೊದಲು ಬ್ರಹಾಮನದಲ್ಲಿ ಬಲಕ್ಕೆ  ತಿರುಗಬೇಕು. ಈ ಕಟ್ರಾ ರಸ್ತೆಯಲ್ಲಿ ಹಲವು ಸುರಂಗಗಳಿವೆ. ಕಟ್ರಾದ ಬಳಿ ೨೦ ಕಿಮಿ ಬಿಟ್ಟರೆ ಉಳಿದೆಲ್ಲವೂ ನಾಲ್ಕು ಲೇನ್ ನ ದ್ವಿಪಥ ರಸ್ತೆ.

ವೈಷ್ಣೋದೇವಿ ದೇವಸ್ಥಾನ ದೂರ

ಬೆಂಗಳೂರಿನಿಂದ 2800ಕಿಮೀ ದೂರದಲ್ಲಿದೆ.ದೆಹಲಿಯವರೆಗೆ ವಿಮಾನ ಅಥವಾ ರೇಲ್ವೇಯಲ್ಲಿ ಹೋಗಿ ಅಲ್ಲಿಂದ ಮುಂದೆ ಬಸ್, ಟ್ರಾವೇಲ ರ್ ಅಥವಾ ಕಾರಲ್ಲಿ ಹೋಗಬಹುದು. ಅಮೃತಸರ್ ಹಾಗೂ ಕಾಶ್ಮೀರ್ ಗೆ ವಿಮಾನದಲ್ಲಿ ಹೋಗಿ ಕೂಡ ಇಲ್ಲಿಗೆ ಹೋಗಬಹುದು.

ದೆಹಲಿಯಿಂದ 651ಕಿಮಿ – ಮಾರ್ಗ ದೆಹಲಿ, ಪಾಣಿಪತ್, ಲೂಧಿಯಾನ,ಜಲಂಧರ್, ಜಮ್ಮು,ಕಟ್ರಾ, ವೈಷ್ಣೋದೇವಿ ಗುಡ್ಡ

ಅಮೃತಸರ್ ನಿಂದ ದೂರ 252 ಕಿಮಿ ಮಾರ್ಗ: ಅಮೃತಸರ್, ಗುರುದಾಸಪುರ್,ಪತಾಂಕೋತ್, ಜಮ್ಮು, ಕಟ್ರಾ, ವೈಷ್ಣೋದೇವಿ ಗುಡ್ಡ

ಕಾಶ್ಮೀರ್ ನಿಂದ ದೂರ 434ಕಿಮಿ ಮಾರ್ಗ: ಕಾಶ್ಮೀರ್, ಶ್ರೀನಗರ್, ಕಟ್ರಾ, ವೈಷ್ಣೋದೇವಿ ಗುಡ್ಡ

ಕಟ್ರಾದಿಂದ ವೈಷ್ಣೋದೇವಿ ಗುಡ್ಡಕ್ಕೆ ನಡೆದು, ಕುದುರೆ, ಡೋಲಿ ಅಥವಾ ಹೆಲಿಕ್ಯಾಪ್ಟರ್ ಅಲ್ಲಿ ಮಾತ್ರ ಹೋಗಲು ಸಾಧ್ಯ. ಹಲವಾರು ಗಂಟೆ ಬೇಕು. ಕಟ್ರಾ ದಲ್ಲಿ ಹೋಟೆಲ್ ಅಲ್ಲಿ ಉಳಿದು ನಂತರ ಹೋಗುವದು ಉತ್ತಮ.

ವೈಷ್ಣೋದೇವಿ ಮಂದಿರಕ್ಕೆ ಹೋಗಲು ಡೋಲಿ ಹಾಗೂ ಹೆಲಿಕಾಪ್ಟರ್ ಸಹ ಇದೆ. ಹೆಲಿಪ್ಯಾಡ್ ಮಂದಿರದಿಂದ ೨.೫ ಕಿಮಿ ದೂರದಲ್ಲಿದ್ದು ಅಲ್ಲಿ ಮತ್ತೆ ಕುದುರೆ ಅಥವಾ ಡೋಲಿಯಲ್ಲಿ ಮಂದಿರಕ್ಕೆ ಹೋಗಿ ಬರಬಹುದು.

ವೈಷ್ಣೋದೇವಿ ಮಂದಿರದ ಹವಾಮಾನ

ಕಟ್ರಾ ಪಟ್ಟಣ ಸಮುದ್ರ ಮಟ್ಟದಿಂದ 2500 ಅಡಿ ಎತ್ತರದಲ್ಲಿದೆ. ಆದರೆ ವೈಷ್ಣೋದೇವಿ ಮಂದಿರ 5200 ಅಡಿ ಎತ್ತರದಲ್ಲಿದೆ. ಈ ಕಾರಣಕ್ಕೆ ವೈಷ್ಣೋದೇವಿ ಮಂದಿರ ಇರುವ ಜಾಗ ಕಟ್ರಾಗಿಂತ ಸ್ವಲ್ಪ ಜಾಸ್ತಿ ತಣ್ಣಗೆ ಇರುತ್ತದೆ.

ಕಾಲಕಟ್ರಾವೈಷ್ಣೋದೇವಿ ಮಂದಿರ
ಮಳೆಗಾಲ (ಆಗಸ್ಟ್ ರಿಂದ ಸಪ್ಟೆಂಬರ್)
ಮಳೆ ಕಾಲದಲ್ಲಿ ಭೂ ಕುಸಿತ ಸರ್ವೇ ಸಾಮಾನ್ಯ.
ಚಳಿಗಾಲ (ಅಕ್ಟೋಬರ್ ರಿಂದ ಫೆಬ್ರವರಿ)3 ರಿಂದ 15 ಡಿಗ್ರಿ-2 ರಿಂದ 13 ಡಿಗ್ರಿ ಚಳಿ ಜಾಸ್ತಿ. ಕೆಲವು ಸಲ ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ಹಿಮ (ಸ್ನೋ) ಬೀಳುವದು.
ಸೆಕೆಗಾಲ (ಮಾರ್ಚ್ ರಿಂದ ಜುಲೈ)20 ರಿಂದ 40 ಡಿಗ್ರಿ15 ರಿಂದ 30 ಡಿಗ್ರಿ

ಚಳಿಗಾಲ ಹಾಗೂ ಮಳೆಗಾಲದಲ್ಲಿ ಸ್ವೆಟರ್ ಹಾಗೂ ಉಣ್ಣೆಯ ಬಟ್ಟೆ ತೆಗೆದುಕೊಂಡು ಹೋಗಲು ಮರೆಯದಿರಿ.

ಈ ಮುಂದಿನ ತಾಣದಲ್ಲಿ ಹವಾಮಾನ ತಿಳಿಯಬಹುದು.

https://www.worldweatheronline.com/v2/weather.aspx?locid=1119422&root_id=1104737&wc=local_weather&map=~/katra-weather/jammu-and-kashmir/in.aspx

http://www.mustseeindia.com/Vaishno-Devi-weather

ವೈಷ್ಣೋದೇವಿ ಮಂದಿರ ಕ್ಕೆ ಹೋಗಲು ಸೂಕ್ತ ಸಮಯ

ಅಕ್ಟೋಬರ್ ಮತ್ತು ಮಾರ್ಚ್ ರಿಂದ ಜುಲೈ ಸೂಕ್ತ ಸಮಯ. ಆದರೆ ಹಬ್ಬದ ದಿನ ಜನ ಜಂಗುಳಿ ಜಾಸ್ತಿ ಇರುತ್ತದೆ. ದಸರಾ, ದೀಪಾವಳಿ ಮೊದಲಾದ ಹಬ್ಬದ ದಿನ ಜಾಸ್ತಿ ಜನ ಇರುತ್ತಾರೆ. ಆದಷ್ಟು ಆ ದಿನ ಹೋಗದಿರುವದು ಉತ್ತಮ.

ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ಹಿಮ (ಸ್ನೋ) ಬೀಳುವ ಸಾಧ್ಯತೆ ಇದೆ. ಹಾಗೂ ತುಂಬಾ ಚಳಿ ಇರುತ್ತದೆ.

ಆಗಸ್ಟ್ ರಿಂದ ಸಪ್ಟೆಂಬರ್ ಮಳೆಕಾಲ ಇಲ್ಲಿ ಹೆಚ್ಚಿನ ಪರ್ವತದ ಮೇಲಿಂದ ಸಡಿಲ ಮಣ್ಣು, ಕಲ್ಲು ಬೀಳುವ ಸಾಧ್ಯತೆ ಇದೆ.

ಬಟ್ಟೆ ವ್ಯವಸ್ಥೆ

ಚಳಿ ತಡೆಯಲು ಸೂಕ್ತವಾದ ಸ್ವೆಟರ್, ಉಣ್ಣೆ ಬಟ್ಟೆ, ಉಣ್ಣೆ ಗ್ಲೌಸ್, ಉಣ್ಣೆ ಟೋಪಿ ಇತ್ಯಾದಿ ನಿಮ್ಮ ಜೊತೆ ಇರಲಿ. ಅದರಲ್ಲೂ ಚಳಿಗಾಲದಲ್ಲಿ ಡಿಸೆಂಬರ್, ಜನವರಿ ಸಮಯದಲ್ಲಿ ಹಿಮ ಬೀಳುವ ಸಾಧ್ಯತೆ ಇದ್ದು ತುಂಬಾ ಚಳಿ ಇರುತ್ತದೆ.

ಊಟ, ತಿಂಡಿ ವ್ಯವಸ್ಥೆ

ಇಲ್ಲಿ ರೋಟಿ, ಪೂರಿ, ಚಪಾತಿ, ಪರೋಟ ಸಿಗುವದು. ಇಡ್ಲಿ ದೋಸೆ ಕಷ್ಟ. ಹೈವೇ ಅಲ್ಲಿ ಡಾಬಾಗಳಲ್ಲಿ ತಂದೋರಿ ರೋಟಿ, ಕರ್ರಿ, ಪಲಾವ್, ವೆಜ್ ಬಿರಿಯಾನಿ, ಅನ್ನ, ಮೊಸರು ಸಿಗುತ್ತೆ. ಅನೇಕ ದಾಬಾಗಳು ಸಂಪೂರ್ಣ ಸಸ್ಯಾಹಾರಿ.
ಕತ್ರಾ ಹಾಗೂ ವೈಷ್ಣೋದೇವಿ ಗುಡ್ಡದಲ್ಲಂತೂ ಅನೇಕ ಹೋಟೆಲ್ ಗಳು ಅಡಿಗೆಗೆ ಈರುಳ್ಳಿ, ಬೆಳ್ಳುಳ್ಳಿ ಸಹ ಹಾಕಲ್ಲ. ಹಾಗೆ ಬೋರ್ಡ್ ಸಹ ಹಾಕಿರುತ್ತಾರೆ. ಅಷ್ಟು ಸಾತ್ವಿಕ ಆಹಾರ ಲಭ್ಯ.

ಉಳಿಯಲು ವ್ಯವಸ್ಥೆ

ವೈಷ್ಣೋದೇವಿ ಮಂದಿರ ಇರುವ ಗುಡ್ಡದ ಕೆಳಗೆ ಇರುವ ಕತ್ರಾ ಊರಲ್ಲಿ ಇರುವದು ಒಳ್ಳೆಯದು. ಇಲ್ಲಿ ನೀವು ಸಂಜೆಯ ವೇಳೆಯಲ್ಲಿ ಮಾರುಕಟ್ಟೆಯಲ್ಲಿ ತಿರುಗಾಟ ಮಾಡಬಹುದು.

ವೈಷ್ಣೋದೇವಿ ಮಂದಿರ

ಕಟ್ರಾದಲ್ಲಿ ಗುಡ್ಡದ ಕೆಳಗೆ ಮೊದಲು ನಿಮ್ಮ ವೈಷ್ಣೋದೇವಿ ಯಾತ್ರೆಯನ್ನು ನೊಂದಾಯಿಸಬೇಕು. ಇದು ಉಚಿತ, ನಿಮ್ಮ ಫೋಟೊ ತೆಗೆದು ಕಂಪ್ಯೂಟರ್ ಅಲ್ಲಿ ಇಟ್ಟುಕೊಂಡು ಚೀಟಿ ಕೊಡುತ್ತಾರೆ.

ಆ ಚೀಟಿ / ಪರ್ಚಿಯನ್ನು ಮೇಲೆ ಹತ್ತುವ ಮೊದಲು ಕೌಂಟರ್ ಅಲ್ಲಿ ನೀಡಬೇಕು. ಈ ಕೌಂಟರ್ ಸ್ವಲ್ಪ ದೂರದಲ್ಲಿದೆ. ಅದಕ್ಕೆ ಮೊದಲು ಚೀಟಿ ಪಡೆಯದೆ ಯಾತ್ರೆ ಆರಂಭಿಸ ಬೇಡಿ.

ಪರ್ವತ ಹತ್ತಿ ಮಂದಿರಕ್ಕೆ ಹೋಗಲು ಈ ಮುಂದಿನ ಮಾರ್ಗಗಳಿವೆ.

  1. ನಡೆಯುವದು – ೩ ರಿಂದ ೪ ಗಂಟೆ
  2. ಕುದುರೆ – ೨ ಗಂಟೆ ೩೦ ನಿಮಿಷ
  3. ಡೋಲಿ – ೩ ಗಂಟೆ
  4. ಹೆಲಿಕ್ಯಾಪ್ಟರ್ – ೫ ನಿಮಿಷ ಹೆಲಿಪ್ಯಾಡ್ ವರೆಗೆ ಅಲ್ಲಿಂದ ೨.೫ ಕಿಮಿ ಇನ್ನೂ ಹೋಗಬೇಕು

ನಡೆಯುವದು

೧೪ಕಿಮಿ ಮೇಲ್ಮುಖವಾಗಿ ಕಾಲಲ್ಲಿ ನಡೆಯುವದು ಸುಲಭದ ಕೆಲಸವಲ್ಲ. ಚಿಕ್ಕ ಮಕ್ಕಳು ಸ್ವಲ್ಪ ದೂರ ನಡೆಯುವದರಲ್ಲಿ ಹೈರಾಣಾಗಿ ದೊಡ್ಡವರನ್ನು ಎತ್ತಿಕೊಂಡು ಹೋಗುವಂತೆ  ಹಠ ಮಾಡುತ್ತವೆ. ವೃಧ್ದರಿಗೆ, ರೋಗಿಗಳಿಗೆ, ಕಾಲು ನೋವು ಇರುವವರು ಕಾಲಲ್ಲಿ ಈ ಪರ್ವತ ಹತ್ತುವದು ತುಂಬಾ ಕಷ್ಟ. ಅಲ್ಲಲ್ಲಿ ರೆಸ್ಟ್ ತಗೊಂಡು ಮಂದಿರ ತಲುಪುವವರೆಗೆ ೩ ರಿಂದ ೪ಗಂಟೆ ಸಮಯ ಬೇಕು.

ಹಾದಿಯಲ್ಲಿ ಸ್ಟೀಲ್ ಛಾವಣಿ

ಕುದುರೆ

ಕುದುರೆಯಲ್ಲಿ ಹೋಗುವದು ಸ್ವಲ್ಪ ಆರಾಮ ಹಾಗೂ ಬೇಗ ಹೋಗಬಹುದು. ಆದರೆ ಕೆಲವರಿಗೆ ಕುಳಿತು ಮೈ ನೋವಾಗಬಹುದು. ಒಂದು ಕುದುರೆಗೆ ೭೦೦ರೂ ಹಾಗೂ ಮಂದಿರ ತಲುಪಲು ೨ ಗಂಟೆ ೩೦ ನಿಮಿಷ ಬೇಕು.

ಕುದುರೆಯಲ್ಲಿ ಹೋಗುತ್ತಿರುವದು

ಡೋಲಿ

ನಾಲ್ಕು ಜನ ಡೋಲಿಯಲ್ಲಿ ಕೂರಿಸಿ ಒಯ್ಯುತ್ತಾರೆ. ಇದು ವಯೋವೃದ್ಧರಿಗೆ, ರೋಗಿಗಳಿಗೆ ಅಥವಾ ಕುದುರೆಯ ಮೇಲೆ ಕೂರಲಾಗದವರಿಗೆ ಸೂಕ್ತ. ಒಂದು ಡೋಲಿ ಸುಮಾರು ೪೦೦೦ ರೂ ಹಾಗೂ ೩ ಗಂಟೆ ಬೇಕು.

ಹೆಲಿಕ್ಯಾಪ್ಟರ್

ನೀವು ಹೆಲಿಕ್ಯಾಪ್ಟರ್ ನಿಂದ ಹೋಗ ಬಯಸಿದರೆ ಮೊದಲೆ‌ ಆನ್ ಲೈನ್ ಬುಕ್ ಮಾಡಬೇಕು. ಆಗ ನಿಮಗೆ ಮಂದಿರ ಪ್ರವೇಶಿಸಲು ವಿಐಪಿ ಪಾಸ್ ಸಿಗುತ್ತೆ.ಹೆಲಿಪ್ಯಾಡ ಇರುವ ಜಾಗ ಬೇರೆ ಹಾಗು ಕುದುರೆ ಇರುವ‌ ಜಾಗ ಬೇರೆ. ನೀವು ರಿಕ್ಷಾದಲ್ಲಿ ಹೋಗಬೇಕು. ಇದು ೧೧೭೦ ರೂ ಹಾಗೂ ಮೇಲಿನ ಹೆಲಿಪ್ಯಾಡ್ ತಲುಪಲು ೫ ನಿಮಿಷ  ಸಾಕು. ಕೆಳಕ್ಕೆ ಬರಲು ಇಷ್ಟೇ ಸಮಯ ಹಾಗು ಹಣ ತೆರಬೇಕು. ಆದರೆ ಇದಕ್ಕೆ  ಅಲ್ಲಿ ಸ್ವಲ್ಪ ಕಾಯಬೇಕು. ಮೇಲಿನ ಹೆಲಿಪ್ಯಾಡ್ ನಿಂದ ಇನ್ನೂ ೨.೫ ಕಿಮಿ ದೂರದಲ್ಲಿ ಮಂದಿರ ಇದ್ದು ನಡಿಗೆ, ಕುದುರೆ ಅಥವಾ ಡೋಲಿಯಲ್ಲಿ ಹೋಗಬಹುದು. ನೀವು ಹೆಲಿಕ್ಯಾಪ್ಟರ್ ಅಲ್ಲಿನ ದಾರಿಯ ಅನುಭವ ಸಿಗದು. ಆದರೆ ಹೆಲಿಕ್ಯಾಪ್ಟರ್ ಇಳಿಯುವ ರೀತಿ ಅದ್ಭುತ ಅನುಭವ.

ಹೆಲಿಕ್ಯಾಪ್ಟರ್ ಇಳಿಯುತ್ತಿರುವದು

ಗುಡ್ಡವನ್ನು ಹತ್ತುವಾಗ ದಾರಿಯಲ್ಲಿ ಅನೇಕ ಅಂಗಡಿಗಳು ಕಾಣ ಸಿಗುತ್ತವೆ. ದೇವರಿಗೆ ಕಾಣಿಕೆ ಕೊಡುವ ಸಾಮಗ್ರಿಗಳು, ಫೋಟೋ ಸ್ಟೂಡಿಯೋ, ಟಿ ಕಾಫಿ ಅಂಗಡಿಗಳು, ವಾಲ್ ನಟ್, ಬಾದಾಮಿ ಮಾರುವ ಅಂಗಡಿಗಳು ಹೀಗೆ ಹತ್ತು ಹಲವು ಅಂಗಡಿಗಳಿವೆ.

ದಾರಿಯಲ್ಲಿ ಮಂಗಗಳ ಕಾಟ ಸಹ ಇದೆ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

ವೈಷ್ಣೋದೇವಿಯ ಹಾದಿಯಲ್ಲಿ ಮಂಗ
ವೈಷ್ಣೋದೇವಿ ಮಂದಿರ ಒಂದು ನೋಟ

ವೈಷ್ಣೋದೇವಿ ಟ್ರಸ್ಟ್ ಯಾತ್ರಿಗಳ ಅನುಕೂಲ ಕ್ಕಾಗಿ ವೆಬ್ ತಾಣ ಹೊಂದಿದ್ದು ಅಲ್ಲಿ ಮಾಹಿತಿಗಳು ಹಾಗೂ ಬುಕಿಂಗ್ ಕೂಡ ಮಾಡಬಹುದು

https://www.maavaishnodevi.org/index.aspx

ದೆಹಲಿಗೆ ವಿಮಾನ ಅಥವಾ ಟ್ರೈನ್ ಅಲ್ಲಿ ಹೋಗಿ ಅಲ್ಲಿಂದ ಪ್ಯಾಕೇಜ್ ಟೂರ್ ಅಲ್ಲಿ ಹೋಗುವದು ಒಂದು ಆಯ್ಕೆ.ಕೆಲವು ಟೂರ್ ಆಪರೇಟರ್ ಗಳ ಲಿಂಕ್ ಕೆಳಗೆ ಕೊಡಲಾಗಿದೆ.

ಐಯರ್ಸಿಟಿಸಿ ಟೂರಿಸಂ

http://www.irctctourism.com/TourPackages/RailTour/vaishno-devi-package-tour.html

ಪನಿಕರ್ಸ್ ಟ್ರ್ಯಾವೆಲ್ಸ್

http://www.travellink.in/static/b2ctemplate/panicker2/chandigarh-manali.html

http://panickerstravel.com/

ಸದರ್ನ್ ಟ್ರ್ಯಾವೆಲ್ಸ್

http://www.southerntravelsindia.com/Holiday-Packages-Itinerary-Jammu-Vaishno-Devi-Amritsar_9

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.