ನೀವು ಕಡಿಮೆ ಬೆಲೆಗೆ ಉತ್ತಮ ಸ್ಮಾರ್ಟ್ ಫೋನ್ ಅನ್ನು ಖರೀದಿಸಲು ನೋಡುತ್ತಿದ್ದೀರಾ? ಸ್ಯಾಮ್ಸಂಗ್ ಗ್ಯಾಲಕ್ಸಿ M30s ಹೇಗೆ ಎಂಬುದನ್ನು ತಿಳಿಯಬೇಕಾ? ಮುಂದೆ ಓದಿ
ಚೈನೀಸ್ ಫೋನ್ ಮೇಕರ್ ಗಳು ಕಡಿಮೆ ಬೆಲೆಗೆ ಉತ್ತಮ ಫೀಚರ್ ಇರುವ ಫೋನ್ ಕೊಡಲು ಆರಂಭಿಸಿದಾಗ ಶುರುವಿನಲ್ಲಿ ಸಾಮ್ಸಂಗ್ ನಿರ್ಲಕ್ಷಿಸಿತು. ಆದರೆ ಸ್ಪರ್ಧೆ ತೀವ್ರ ಆದಾಗ ಅದೂ ಕೂಡ ಆಖಾಡಕ್ಕೆ ಇಳಿಯದೇ ಬೇರೆ ಆಯ್ಕೆ ಇರಲಿಲ್ಲ.
ಇಂತಹ ಕಾರಣಕ್ಕೆ ಸಾಮ್ಸಂಗ್ ಎಂ ಸಿರೀಸ್ ಫೋನ್ ಅನ್ನು ಮಾರುಕಟ್ಟೆಗೆ ಬಿಟ್ಟಿತು. M10, M20, M30, M40 ಮೊದಲು ಬಂದ ಮಾಡೆಲ್ ಗಳು. ಅದರಲ್ಲಿ ಇನ್ನೂ ಸ್ವಲ್ಪ ಅಪ್ಗ್ರೇಡ್ ಮಾಡಿ M10s ಹಾಗೂ M30s ಬಿಡುಗಡೆ ಮಾಡಿದೆ.
ಅಮೇಜಾನ್ ತಾಣದಲ್ಲಿ ಈ ಫೋನ್ ಪುಟ ನೋಡಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ. ಸಾಮ್ಸಂಗ್ ಗ್ಯಾಲಕ್ಸಿ M30s ಸ್ಮಾರ್ಟ್ ಫೋನ್ ಇದಕ್ಕೆ ಸುಮಾರು 14000 ಬೆಲೆ ಇದೆ. ನಿಮ್ಮ ಬಜೆಟ್ ಕಡಿಮೆ ಇದ್ದರೆ ಸ್ಯಾಮ್ಸಂಗ್ ಗ್ಯಾಲಕ್ಸಿ M10s ಸಹ ಒಮ್ಮೆ ನೋಡಿ. ಅದು 8000ಕ್ಕೆ ಸಿಗುತ್ತದೆ.

M30s ಫೋನಿನ ನಿರ್ದಿಷ್ಟ ವಿವರಣೆ ಹೀಗಿವೆ.
- 6.4 ಇಂಚಿನ ಫುಲ್ ಎಚ್ಡಿ+ ಸೂಪರ್ ಅಮೋಲ್ಡ್ ಸ್ಕ್ರೀನ್.
- 2.3 + 1.74 ಗಿಹರ್ಟ್ಜ ಎಕ್ಸಿಯೋನ್ 9110 ಎಂಟು ಕೋರಿನ ಪ್ರಾಸೆಸರ್.
- ಮಾಲಿ 73 ಜಿಪಿಯು
- 48MP + 8MP + 5MP ಹಿಂದೆ ಹಾಗೂ 16MP ಮುಂದೆ ಕ್ಯಾಮೆರಾ
- 6000 ಎಂಎಎಚ್ ಬ್ಯಾಟರಿ
- 4 ಅಥವಾ 6ಜಿಬೀ ರಾಮ್
- 64 ಅಥವಾ128ಜಿಬಿ ಮೆಮರಿ
- 2 ನ್ಯಾನೋ ಸಿಮ್ (4ಜಿ +4ಜಿ) 512 ವರೆಗಿನ ಎಸ್ಡಿ ಕಾರ್ಡಗೆ ಪ್ರತ್ಯೇಕ ಸ್ಲಾಟ್.
- ಅಂಡ್ರಾಯಿಡ್ 9 ಪೈ ಓಎಸ್
- 15ವಾಟಿನ ಟೈಪ್ ಸಿ ಫಾಸ್ಟ್ ಚಾರ್ಜ್
- 3.5 ಆಡಿಯೋ ಡಾಲ್ಬೀ ಅಟ್ಮೋಸ್ ನೊಂದಿಗೆ
- ಭಾರ 186 ಗ್ರಾಮ್
- ಫಿಂಗರ್ ಫ್ರಿಂಟ್ ಸೆನ್ಸರ್, ಕಂಪಾಸ್ ಸೆನ್ಸರ್, ಜಿಪಿಎಸ್
- ಮುಖ ಗುರುತಿಸಿ ಲಾಗಿನ್ ಆಗಬಹುದು
ಈ ಫೋನಿನ ಉತ್ತಮ ಗುಣಗಳು ಹೀಗಿವೆ
- ಅತ್ಯುತ್ತಮ ದೊಡ್ಡದಾದ ತೆರೆ
- ದೊಡ್ಡ ಬ್ಯಾಟರಿ ಆರಾಮವಾಗಿ ಇಡೀದಿನ ಬರಬಲ್ಲ ಬ್ಯಾಟರಿ
- ಉತ್ತಮ ಕ್ಯಾಮೆರಾ
- ವೇಗದ ಚಾರ್ಜಿಂಗ್
- ವೇಗವಾಗಿ ಗೇಮ್ ಆಡಲು ಜಿಪಿಯು
- ಫಿಂಗರ್ಪ್ರಿಂಟ್ ಸೆನ್ಸರ್ ಹಾಗೂ ಮುಖ ಪರೀಕ್ಷೆ ಸೌಲಭ್ಯ ಇದೆ
- ಕಂಪಸ್ ಸೆನ್ಸರ್ ಸಹ ಇದೆ.
ಕೊರತೆ ಹೀಗಿದೆ
- ಐರ ಬ್ಲಾಸ್ಟರ್ ಸೆನ್ಸರ್ ಇಲ್ಲ ಟಿವಿ ರಿಮೋಟ್ ತರಹ ಬಳಸಲಾಗದು.
- ಕಡಿಮೆ ಬೆಳಕಿನಲ್ಲಿ ಕ್ಯಾಮರಾ ಚೆನ್ನಾಗಿ ಕೆಲಸ ಮಾಡದು.
ಒಟ್ಟಿನಲ್ಲಿ ಹೇಳುವುದಾದರೆ ಸ್ಯಾಮ್ಸಂಗ್ ಗ್ಯಾಲಕ್ಸಿ M30s ಅತ್ಯುತ್ತಮ ಹಣಕ್ಕೆ ತಕ್ಕ ಮೌಲ್ಯ ನೀಡುವುದು. ನಿರಾಸೆ ಮಾಡದು.
ನೀವು ಫ್ಲಾಗ್ ಶಿಪ್ ಫೋನನ್ನು ನೋಡುತ್ತಿಲ್ಲವಾದರೆ ಮಿಡ್ ರೇಂಜಿನ ಫೋನ್ ಬಯಸಿದರೆ ಖಂಡಿತ ಖರೀದಿಸಬಹುದು.
ಅಮೇಜಾನ್ ತಾಣದಲ್ಲಿ ಈ ಫೋನ್ ಪುಟ ನೋಡಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ. ಸಾಮ್ಸಂಗ್ ಗ್ಯಾಲಕ್ಸಿ M30s ಸ್ಮಾರ್ಟ್ ಫೋನ್
ಪರದೆ ಬಗ್ಗೆ
2340 * 1080 ರಿಸೊಲ್ಯೂಷನ್ ಇರುವ ಸೂಪರ್ ಅಮೋಲ್ದ್ ಪರದೆ ಈ ಫೋನಿನ ಹೈಲೈಟ್. ಸಹಜ ಹಾಗೂ ವಿವಿಡ್ ಮೋಡ್ ಅಲ್ಲಿ ಈ ಪರದೆ ಸಕತ್ತಾಗಿದೆ. ಇದರಲ್ಲಿ ಕಪ್ಪು ಬಣ್ಣ ಕಪ್ಪಾಗಿಯೇ ಗೋಚರಿಸುತ್ತೆ.
ಬ್ಯಾಟರಿ ಬಗ್ಗೆ
ಈ ಫೋನ್ ದೊಡ್ಡದಾದ 6000ಎಂಎಎಚ್ ಬ್ಯಾಟರಿ ಹೊಂದಿದ್ದು ಆರಾಮವಾಗಿ ಒಂದರಿಂದ ಒಂದುವರೆ ದಿನ ಬರುತ್ತದೆ.
ಕ್ಯಾಮೆರಾ ಬಗ್ಗೆ
ಈ ಫೋನ್ ಬಳಸಿ ತೆಗೆದ ಕೆಲವು ಉದಾ ಚಿತ್ರ ಗಳು ಮುಂದಿವೆ. ಕ್ಯಾಮೆರಾ ಗುಣಮಟ್ಟ ಚೆನ್ನಾಗಿದೆ. 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಪಿಕ್ಸೆಲ್ ಬಿನ್ನಿಂಗ್ ತಂತ್ರಜ್ಞಾನ ಬಳಸಿ 12ಎಂಪಿ ಫೋಟೋ ತಯಾರಿಸುತ್ತದೆ. ಇದರಲ್ಲಿ ತೆಗೆದ ಫೋಟೋ ಡೀಟೇಲ್ ತುಂಬಾ ಚೆನ್ನಾಗಿದೆ. ಬೇಕಿದ್ದರೆ 48ಎಂಪಿ ರಾ ಫೋಟೋ ಸಹ ತೆಗೆಯಬಹುದು. ಮೂರು ಸೆನ್ಸರ್ ಇರುವ ಕ್ಯಾಮೆರಾ ವೈಡ್ ಎಂಗಲ್ ಗೆ ಬೇರೆ ಲೆನ್ಸ್ ಬಳಸಿ ಚಿತ್ರ ತೆಗೆಯುತ್ತದೆ. 16 ಎಂಪಿ ಮುಂದಿನ ಕ್ಯಾಮೆರಾ ಕೂಡ ವೈಡ್ ಎಂಗಲ್ ಸೌಲಭ್ಯ ಇದೆ.
ಈ ಫೋನು ಬಳಸಿ 4ಕೆ ವಿಡಿಯೋ ತೆಗೆಯಬಹುದು.







ಅಮೇಜಾನ್ ತಾಣದಲ್ಲಿ ಈ ಫೋನ್ ಪುಟ ನೋಡಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ. ಸಾಮ್ಸಂಗ್ ಗ್ಯಾಲಕ್ಸಿ M30s ಸ್ಮಾರ್ಟ್ ಫೋನ್ ಇದಕ್ಕೆ ಸುಮಾರು 14000 ಬೆಲೆ ಇದೆ. ನಿಮ್ಮ ಬಜೆಟ್ ಕಡಿಮೆ ಇದ್ದರೆ ಸಹ ಒಮ್ಮೆ ನೋಡಿ. ಸ್ಯಾಮ್ಸಂಗ್ ಗ್ಯಾಲಕ್ಸಿ M10s ಅದು 8000ಕ್ಕೆ ಸಿಗುತ್ತದೆ. ಉಳಿದ ಎಂ ಸಿರೀಸ್ ಫೋನ್ ಗಳಿಂದ 2 ಫೋನ್ ಗಳು ಉತ್ತಮ.
ಕನ್ನಡದ ಬೆಂಬಲ
ನಾನು ಸಾಮಾನ್ಯವಾಗಿ ನನ್ನ ಫೋನ್ನಲ್ಲಿ ಕನ್ನಡ ಭಾಷೆಯನ್ನು ಬಳಸುತ್ತೇನೆ. ಸ್ಯಾಮ್ಸಂಗ್ ಸಾಫ್ಟ್ವೇರ್ ಕನ್ನಡ ಭಾಷೆಯ ಸೆಟ್ಟಿಂಗ್ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ.


ಈ ಫೋನನ್ನು ನೀವು ಬಳಸುತ್ತಿದ್ದೀರಾ ನಿಮ್ಮ ಅನಿಸಿಕೆ ಏನು ತಿಳಿಸಿ.