ಆಗಷ್ಟ್ 24, 2020

ನಿಮ್ಮ ಮನೆಗೆ ಹೊಸ ಟಿವಿ ಖರೀದಿಸುವ ಮುನ್ನ ಗಮನಿಸಿ

ಸ್ನೇಹಿತರಿಗೆ ಹಂಚಿಕೊಳ್ಳಿ

ಇಂದು ಕೊರೊನಾದಿಂದ ಎಲ್ಲ ಚಿತ್ರಮಂದಿರಗಳು ಮುಚ್ಚಿವೆ. ಇಂದು ಜನ ಮನೋರಂಜನೆಗೆ ಟಿವಿಯನ್ನು ಅವಲಂಬಿಸಿದ್ದಾರೆ.

ಕ್ಯಾಥೋಡ್ ರೇ ಟ್ಯೂಬ್(ಸಿಆರ್ಟಿ) ಯಿಂದ ಆರಂಭವಾದ ಟಿವಿ ತಂತ್ರಜ್ಞಾನ ಇಂದಿನ ಎಲ್ಸಿಡಿ,ಎಲ್ಲಿಡಿ,ಕ್ಯೂಎಲ್ಡಿ, ಓಎಲ್ಡಿ ವರೆಗೆ ಮುಂದುವರೆದಿದೆ. ೩ಡಿ ತಂತ್ರಜ್ಞಾನ ಕೂಡಾ ಟಿವಿಗೆ ಕಾಲಿಟ್ಟಿದೆ.

ಇಂದು ಟಿವಿ ಎಂಟು ಸಾವಿರದಿಂದ ಹಲವು ಲಕ್ಷ ಬೆಲೆಯವರೆಗೆ ಲಭ್ಯವಿದೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಜಾಸ್ತಿ ಬೆಲೆಯ ಟಿವಿ ಸುಮ್ಮನೆ ಖರೀದಿಸಬೇಡಿ. ಕಡಿಮೆ ಬೆಲೆಗೆ ಉತ್ತಮ ಸೌಲಭ್ಯ ನೀಡುವ ಟಿವಿ ಖರೀದಿಸಿ.ನೀವು ನಿಮ್ಮ ಮನೆಗೆ ಸೂಕ್ತ ಟಿವಿ ಖರೀದಿಸುವದು ಹೇಗೆ ಎಂದು ತಿಳಿಯಲು ಈ ಲೇಖನ ಪೂರ್ತಿ ಓದಿ.

ಒಂದು ಟಿವಿ ಆಯ್ಕೆ ಮಾಡಲು ರಿಸೊಲ್ಯೂಶನ್, ಗಾತ್ರ, ಬ್ರಾಂಡ್, ಸೌಲಭ್ಯಗಳು ಮುಖ್ಯ. ಒಂದು ಬಜೆಟ್ ಟಿವಿ ಹಾಗೂ ಪ್ರಿಮಿಯಂ ಟಿವಿಯ ಫೀಚರ್ ಏನಿರಬೇಕು ತಿಳಿಯಲು ಕೆಳಗಿನ ಪಟ್ಟಿ ನೋಡಿ.

ಫೀಚರ್ಬಜೆಟ್ ಟಿವಿಪ್ರಿಮಿಯಂ ಟಿವಿಅನಿಸಿಕೆಗಳು
ರಿಸೊಲ್ಯುಶನ್4K4K or 8Kಚಿಕ್ಕ ಟಿವಿ ಹೊರತು ಪಡಿಸಿ ದೊಡ್ಡ ಟಿವಿಗಳಿಗೆ ೪ಕೆ ಸೂಕ್ತ
ರಿಫ್ರೆಶ್ ರೇಟ್60Hz120Hz / 240Hzಗೇಮ್ ಆಡುವವರಿಗೆ ೧೨೦ಹರ್ಟ್ಜ್ ಸೂಕ್ತ
ಪರದೆ ತಂತ್ರಜ್ಞಾನLED – IPS/VAOLEDಒಎಲ್ ಇಡಿ ಉತ್ತಮ ತಂತ್ರಜ್ಞಾನ ಆದರೆ ದುಬಾರಿ. ಐಪಿಎಸ್ ತೆರೆ ವೈಡ್ ಎಂಗಲ್ ಆಗಿದ್ದು ವಿಎ ವಾರೆಯಾಗಿ ನೋಡಿದಾಗ ಚೆನ್ನಾಗಿ ಕಾಣಿಸದು. ವಿಎ ತೆರೆ ಐಪಿಎಸ್ ಗಿಂತ ಕಪ್ಪು ಬಣ್ಣ ಚೆನ್ನಾಗಿ ತೋರಿಸುತ್ತೆ. ಉತ್ತಮ ಬ್ರಾಂಡ್ ಪರದೆ ಗುಣಮಟ್ಟ ಚೆನ್ನಾಗಿರುತ್ತೆ.
ಆಪರೇಟಿಂಗ್ ಸಿಸ್ಟೆಮ್ಅಂಡ್ರಾಯಿಡ್/ಟೈಜನ್/ವೆಬ್ ಓಎಸ್ಅಂಡ್ರಾಯಿಡ್/ಎಪಲ್
ವಿಡಿಯೋಡಾಲ್ಬೀ ವಿಶನ್ / ಎಚ್ ಡಿ ಆರ್ ೧೦ಡಾಲ್ಬೀ ವಿಶನ್ / ಎಚ್ ಡಿ ಆರ್ ೧೦ಎಚ್ ಡಿ ಆರ್ ೧೦ ನೈಸರ್ಗಿಕ ಚಿತ್ರ ತೋರಿಸುತ್ತೆ.
ಆಡಿಯೋಡಾಲ್ಬೀ ಡಿಜಿಟಲ್ +ಡಾಲ್ಬೀ ಡಿಜಿಟಲ್ +
ಗಾತ್ರ43 / 50 / 55 ಇಂಚು55 / 65 ಇಂಚುದೊಡ್ಡ ಹಾಲ್ ಗೆ ದೊಡ್ಡ ಟಿವಿ ಒಳ್ಳೆಯದು.

ರಿಸಾಲ್ಯೂಶನ್

ಈಗಿನ ಸಂದರ್ಭದಲ್ಲಿ 4K ಟಿವಿ ಅತಿ ಉತ್ತಮ. ಕೇವಲ ಬಜೆಟ್ ಸಮಸ್ಯೆ ಇದ್ದರೆ ಮಾತ್ರ ಫುಲ್ ಎಚ್ ಡಿ ಅಥವಾ ಎಚ್ ಡಿ ರೆಡಿ ಟಿವಿ ಆಯ್ಕೆ ಮಾಡಿ. ೪ಕೆ ಟಿವಿ 3840 * 2160 ಪಿಕ್ಸೆಲ್ ರಿಸೊಲ್ಯೂಶನ್ ಇದ್ದು ಚಿತ್ರಗಳು ಹೆಚ್ಚು ಸ್ಪಷ್ಟವಾಗಿ ಕ್ಲಿಯರ್ ಆಗಿ ಕಾಣಿಸುತ್ತವೆ. ೪ಕೆ ದೊಡ್ಡ ಟಿವಿಗೆ ಇದ್ದರೆ ಉತ್ತಮ. ಚಿಕ್ಕ ಟಿವಿಗೆ (೪೦ ಇಂಚು ಅಥವಾ ಚಿಕ್ಕದಿರುವ) ಫುಲ್ ಎಚ್ ಡಿ ಆದರೂ ಇದ್ದರೆ ಉತ್ತಮ.

ರಿಸಾಲ್ಯೂಶನ್ಅನಿಸಿಕೆ
೮ಕೆಇದು ಹೊಸ ತಂತ್ರಜ್ಞಾನ. ತುಂಬಾ ದುಬಾರಿ ಆಗಿದ್ದು ಇನ್ನೂ ೪ಕೆ ಅಲ್ಲಿ ಕಂಟೆಂಟ್ ಲಭ್ಯ ಜಾಸ್ತಿ ಇಲ್ಲ. ಗ್ರಾಹಕರು ಇದನ್ನು ಕಡಿಮೆ ಆಗುವವರೆಗೆ ಬಿಡಿ. ಪ್ರಾಡಕ್ಷನ್ ಹೌಸ್ ಗಳು ೮ಕೆ ಯಲ್ಲಿ ಕಂಟೆಂಟ್ ಮಾಡಿದರೆ ಅದು ಹೆಚ್ಚು ಕಾಲ ಬಾಳುತ್ತದೆ.
೪ಕೆಇದು ತುಂಬಾ ಉತ್ತಮ.
ಫುಲ್ ಎಚ್ ಡಿಇದು ಪರವಾಗಿಲ್ಲ. ಆದರೆ ೪೩ ಇಂಚು ಹಾಗೂ ದೊಡ್ಡ ಟಿವಿಗೆ ೪ಕೆ ಟಿವಿ ಮಾತ್ರ ಖರೀದಿಸಿ. ಬಜೆಟ್ ಸಮಸ್ಯೆ ಇದ್ದರೆ ಅಥವಾ ಚಿಕ್ಕ ಟಿವಿಗೆ ಇದು ಓಕೆ.
ಎಚ್ ಡಿ ರೆಡಿಸಾಧ್ಯವಾದಷ್ಟು ಈ ಟಿವಿ ಖರೀದಿಸುವ ಮುನ್ನ ಯೋಚನೆ ಮಾಡಿ. ಬಜೆಟ್ ಸಮಸ್ಯೆ ಇದ್ದರೆ ಮಾತ್ರ. ೪ಕೆ ಅಥವಾ ಕನಿಷ್ಟ ಫುಲ್ ಎಚ್ ಡಿ ಉತ್ತಮ. ಇದು ಸಾಧಾರಣ ಪರದೆ.

ಗಾತ್ರ(ಸೈಜ್)

೫೫ ಇಂಚಿನ ಹಾಗೂ ದೊಡ್ಡ ಟಿವಿಗಳು ಮನೆಯಲ್ಲಿ ಸಿನಿಮಾ ಹಾಲ್ ಅನುಭವ ನೀಡುತ್ತವೆ. ಆದರೆ ಚಿಕ್ಕ ಹಾಲ್ ಗೆ ದೊಡ್ಡ ಟಿವಿ ಹಾಕಿದರೆ ಹತ್ತಿರದಿಂದ ನೋಡುವದು ಕಷ್ಟ. ಚಿಕ್ಕ ಹಾಲ್ ಗೆ ೪೩ ಇಂಚು ಅಥವಾ ೩೨ ಇಂಚು ಸಾಕು. ದೊಡ್ಡ ಹಾಲ್ ಗೆ ದೊಡ್ಡ ಟಿವಿ ಉತ್ತಮ. ಹಾಲ್ ಉದ್ದ ೧೫-೨೦ ಅಡಿಗೂ ಉದ್ದ ಇದ್ದರೆ ೫೫ ಇಂಚಿನ ಟಿವಿ ಅಥವಾ ದೊಡ್ಡ ಟಿವಿ ಒಳ್ಳೆಯದು.

ಆಪರೇಟಿಂಗ್ ಸಿಸ್ಟೆಮ್

ಗೂಗಲ್ ಅಂಡ್ರಾಯಿಡ್ ಹೊಸ ವರ್ಶನ್ ಇರುವ ಟಿವಿ ಒಳ್ಳೆಯದು. ಸ್ಯಾಮಸಂಗ್ ನ ಟೈಜನ್ ಹಾಗೂ ಎಲ್ ಜಿಯ ವೆಬ್ ಓಎಸ್ ಕೂಡಾ ಓಕೆ. ಆದರೆ ಅವುಗಳಲ್ಲಿ ಕೆಲವು ಅಪ್ಲಿಕೇಶನ್ ಸಿಗದಿರಬಹುದು. ಸಾಧ್ಯವಿದ್ದಷ್ಟು ಹಳೆಯ ಆಪರೇಟಿಂಗ್ ಸಿಸ್ಟೆಮ್ ಇರುವ ಟಿವಿ ಖರೀದಿಸದಿರಿ. ಯಾಕೆಂದರೆ ಎಷ್ಟೋ ಅಪ್ಲಿಕೇಶನ್ ಗಳು ಸ್ವಲ್ಪ ಸಮಯದ ನಂತರ ಕೆಲಸ ಮಾಡದಿರಬಹುದು.

ಅಪ್ಲಿಕೇಶನ್ ಗಳು

ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್, ಅಮೇಜಾನ್ ಪ್ರೈಮ್ ಮೊದಲಾದ ನಿಮಗೆ ಬೇಕಾದ ಅಪ್ಲಿಕೇಶನ್ ಇದೆ ಎನ್ನುವದನ್ನು ಖಾತರಿ ಪಡಿಸಿ.

ವಿಡಿಯೋ/ ಆಡಿಯೋ

ಟಿವಿ ಎಚ್ ಡಿ ಆರ್ ೧೦, ಡಾಲ್ಬಿ ವಿಶನ್ ಮೊದಲಾದ ಎಚ್ ಡಿ ಆರ್ ಸ್ಟಾಂಡರ್ಡ್ ಅನ್ನು ಬೆಂಬಲಿಸುತ್ತೆ ಖಚಿತ ಮಾಡಿಕೊಌ. ಇವು ದೃಶ್ಯವನ್ನು ಸುಂದರ ಗೊಳಿಸಿ ನೈಸರ್ಗಿಕವಾಗಿ ತೋರಿಸುತ್ತವೆ.

ಡಾಲ್ಬಿ ಡಿಜಿಟಲ್ + ಆಡಿಯೋ ಬೆಂಬಲ್ ಇದ್ದರೆ ಒಳ್ಳೆಯದು.

ಪರದೆ

೮ಬಿಟ್ ಗಿಂತ ೧೦ಬಿಟ್ ಪ್ಯಾನೆಲ್ ಒಳ್ಳೆಯದು. ಎಲ್ ಸಿಡಿಯಲ್ಲಿ ಐಪಿಎಸ್ ಪ್ಯಾನೆಲ್ ಒಳ್ಳೆಯದು.

ಪರದೆಯಲ್ಲಿ ಹಲವು ಬಗೆಗಳಿವೆ.

  • ಎಲ್ ಸಿ ಡಿ – ಟಿಎನ್
  • ಎಲ್ ಸಿ ಡಿ – ವಿಎ
  • ಎಲ್ ಸಿ ಡಿ – ಐಪಿಎಸ್
  • ಕ್ಯೂಎಲ್ ಇ ಡಿ
  • ಓಎಲ್ ಇಡಿ

ಅಕಸ್ಮಾತ್ ನಿಮಗೆ ಬಜೆಟ್ ಲಿಮಿಟ್ ಇಲ್ಲದಿದ್ದರೆ ಓಎಲ್ ಇ ಡಿ ಟಿವಿ ಖರೀದಿಸಿ. ಅವು ಅತ್ಯುತ್ತಮ ಡಿಸ್ಪ್ಲೇ ಆಗಿದೆ. ಒನ್ ಪ್ಲಸ್ ಅಂತಹ ತಯಾರಕರಿಂದ ಕಡಿಮೆ ಬೆಲೆಗೆ ಸಹ ಸಿಗುತ್ತದೆ.

ಕ್ಯೂಎಲ್ ಇ ಡಿ ಸ್ವಲ್ಪ ಕಡಿಮೆ ಬೆಲೆಗೆ (ಓಎಲ್ ಇ ಡಿ ಗಿಂತ) ಸಿಗುತ್ತೆ. ಆದರೆ ಎಲ್ ಇ ಡಿ ಬ್ಯಾಕ್ ಲೈಟ್ ಇರುವ ಎಲ್ ಸಿ ಡಿ ಪ್ಯಾನೆಲ್ ಗಳು ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ಬಜೆಟ್ ನಲ್ಲಿ ಟಿವಿ ಬೇಕಿರುವವರು ಎಲ್ ಸಿ ಡಿ – ವಿಎ ಹಾಗೂ ಐಪಿಸ್ ಪರದೆ ಇರುವ ಟಿವಿ ನೋಡುವದು ಉತ್ತಮ.

ಬ್ರೈಟ್ನೆಸ್ಸ್ ೪೦೦ ರಿಂದ ೫೫೦ ನಿಟ್ಸ್ ಇದ್ದರೆ ಉತ್ತಮ. ೨೫೦ಕ್ಕಿಂತ ಕಡಿಮೆ ನಿಟ್ಸ್ ಬ್ರೈಟ್ನೆಸ್ಸ್ ಇದ್ದರೆ ಒಮ್ಮೆ ಪರೀಕ್ಷಿಸಿ ಖರೀದಿಸಿ.

ರಿಪ್ರೆಶ್ ರೇಟ್

ಸಾಮಾನ್ಯವಾಗಿ ೫೦ಹರ್ಟ್ಜ್, ೬೦ಹರ್ಟ್ಜ್, ೧೨೦ಹರ್ಟ್ಜ್, ೨೦೦ಹರ್ಟ್ಜ್ ಹಾಗೂ ೨೪೦ಹರ್ಟ್ಜ್ ರಿಪ್ರೆಶ್ ರೇಟ್ ಅಲ್ಲಿ ಟಿವಿ ಲಭ್ಯವಿದೆ. ಜಾಸ್ತಿ ರಿಪ್ರೆಶ್ ರೇಟ್ ಹಾಗೂ ಕಡಿಮೆ ರಿಸ್ಪಾನ್ಸ್ ಟೈಮ್ ಇದ್ದರೆ ಗೇಮ್ ಆಡಲು, ಸ್ಪೋರ್ಟ್ಸ್ ನೋಡಲು ಅನುಕೂಲ. ಜಾಸ್ತಿ ರಿಪ್ರೆಶ್ ರೇಟ್ ಇರುವ ಟಿವಿ ದುಬಾರಿ ಇರುವದರಿಂದ ೬೦ಹರ್ಟ್ಜ್ ಟಿವಿ ಸಾಕು. ನಿಮ್ಮ ಬಜೆಟ್ ಗೆ ೧೨೦ಹರ್ಟ್ಜ್ ಅಥವಾ ೨೪೦ ಹರ್ಟ್ಜ್ ಗೆ ಸಿಕ್ಕರೆ ಬಿಡಬೇಡಿ.

ಸ್ಮಾರ್ಟ್ ಟಿವಿ

ಖರೀದಿಸುವಾಗ ಸ್ಮಾರ್ಟ್ ಟಿವಿಯನ್ನೇ ಖರೀದಿಸಿ. ಈಗ ಸ್ಮಾರ್ಟ್ ಟಿವಿ ಬೆಲೆ ಕಡಿಮೆ ಆಗಿದೆ. ಕನಿಷ್ಟ ೧.೫ಜಿಬಿ ರಾಮ್ ಹಾಗೂ ನಾಲ್ಕು ಕೋರಿನ ಪ್ರಾಸೆಸರ್ ಇರುವದು ಒಳ್ಳೆಯದು. ಜಿಪಿಯು ಇದ್ದರೆ ಅತ್ಯುತ್ತಮ.

ಗೂಗಲ್ ಅಸಿಸ್ಟಂಟ್, ಅಮೇಜಾನ್ ಲೆಕ್ಸಾ, ಸಿರಿ ಯಾವುದಾದರೊಂದು ವಾಯಿಸ್ ಸರ್ವೀಸ್ ಇದ್ದರೆ ಉತ್ತಮ.

ಕನಿಷ್ಟ ಮೊಬೈಲ್ ನಿಂದ ಸ್ಟ್ರೀಮಿಂಗ್ ಮಾಡುವ ಸೌಲಭ್ಯ ಇದ್ದರೆ ಅದನ್ನು ಬಳಸಿ ಫೋಟೋ, ವಿಡಿಯೋ ನೋಡಬಹುದು.

ಕೊನೆಯ ಮಾತು

  • ತೀರಾ ಜಾಸ್ತಿ ಬೆಲೆಯ ಟಿವಿ ಖರೀದಿಸ ಬೇಡಿ. ಹೊಸ ತಂತ್ರಜ್ಞಾನದ ಟಿವಿ ತುಂಬಾ ದುಬಾರಿ ಆಗಿರುತ್ತವೆ. ಉದಾ ೮ಕೆ ಟಿವಿ. ಈಗಿನ ಕಾಲಕ್ಕೆ ೪ಕೆ ಟಿವಿ ಸಾಕು.
  • ೫೫ ಅಥವಾ ೬೫ ಇಂಚಿನ ಟಿವಿ ನಿಮ್ಮ ಹಾಲ್ ದೊಡ್ಡದಾಗಿದ್ದರೆ ಖರೀದಿಸಿ, ಅವು ಉತ್ತಮ ಸಿನಿಮಾ ಅನುಭವ ನೀಡುತ್ತವೆ.
  • ಉತ್ತಮ ಬ್ರಾಂಡಿನ ಟಿವಿ ಖರೀದಿಸಿ. ಅವು ಬಾಳಿಕೆ ಬರುತ್ತವೆ. ಸರ್ವೀಸ್ ಚೆನ್ನಾಗಿರುತ್ತದೆ.
  • ಅವಶ್ಯಕತೆ ಇರದ ಸೌಲಭ್ಯ ಇಲ್ಲದಿದ್ದರೆ ಒಳ್ಳೆಯದು. ಅದು ಬೆಲೆ ಕಡಿಮೆ ಮಾಡುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.