ಆಗಷ್ಟ್ 23, 2020

ನಿಯತಕಾಲಿಕೆಗಳು

ಸ್ನೇಹಿತರಿಗೆ ಹಂಚಿಕೊಳ್ಳಿ

ನಿಗದಿತ ಅವಧಿಗೊಮ್ಮೆ ಬರುವ ಅಥವಾ ಪ್ರಕಟವಾಗುವ ಪತ್ರಿಕೆಗಳನ್ನು ನಿಯತಕಾಲಿಕೆ ಎನ್ನುತ್ತಾರೆ. ಪ್ರತಿದಿನ ಪ್ರಕಟವಾದರೆ ದಿನಪತ್ರಿಕೆ ಅಥವಾ ದೈನಿಕ, ವಾರಕ್ಕೊಮ್ಮೆ ಪ್ರಕಟವಾಗುವ ಪತ್ರಿಕೆ ವಾರ ಪತ್ರಿಕೆ, ಪಕ್ಷಕ್ಕೊಮ್ಮೆ ಅಂದರೆ ಹದಿನೈದು ದಿನಕ್ಕೊಮ್ಮೆ ಪ್ರಕಟವಾದರೆ ಪಾಕ್ಷಿಕ ಎನ್ನುತ್ತಾರೆ. ತಿಂಗಳಿಗೊಮ್ಮೆ ಅರ್ಥಾತ್ ಮಾಸಕ್ಕೆ ಒಮ್ಮೆ ಪ್ರಕಟವಾದರೆ ಮಾಸಪತ್ರಿಕೆ, ಎರಡು ತಿಂಗಳಿಗೊಮ್ಮೆ ದ್ವೈ ಮಾಸಿಕ, ಮೂರು ತಿಂಗಳಿಗೊಮ್ಮೆ ತ್ರೈಮಾಸಿಕ, ಆರು ತಿಂಗಳು ಒಮ್ಮೆ ಅರ್ಧವಾರ್ಷಿಕ, ವರ್ಷಕ್ಕೊಮ್ಮೆ ಅಥವಾ ಹನ್ನೆರಡು ತಿಂಗಳಿಗೊಮ್ಮೆ ಪ್ರಕಟವಾದರೆ ವಾರ್ಷಿಕ ಪತ್ರಿಕೆ ಎನ್ನಬಹುದು.

ಅದೇ ರೀತಿ ಎರಡು ವರ್ಷಕ್ಕೊಮ್ಮೆ ದ್ವೈವಾರ್ಷಿಕ, ಮೂರು ವರ್ಷಕ್ಕೊಮ್ಮೆ ತ್ರೈವಾರ್ಷಿಕ, ನಾಲ್ಕು ವರ್ಷಕ್ಕೊಮ್ಮೆ ಚತುರ್ವಾರ್ಷಿಕ, ಐದು ವರ್ಷಕ್ಕೊಮ್ಮೆ ಪ್ರಕಟವಾದರೆ ಪಂಚವಾರ್ಷಿಕ ಪತ್ರಿಕೆ ಎನಿಸಿಕೊಳ್ಳುತ್ತದೆ.

ಇನ್ನು ಹತ್ತು ವರ್ಷಕ್ಕೊಮ್ಮೆ ಆದರೆ ದಶವಾರ್ಷಿಕ ಎಂದು ಕರೆಯಲ್ಪಡುತ್ತದೆ. ಇದೇ ರೀತಿ ವರದಿ / ರಿಪೋರ್ಟ್ ಗಳನ್ನು ಸಹ ದೈನಿಕ ವರದಿ, ಮಾಸಿಕ ವರದಿ, ವಾರ್ಷಿಕ ವರದಿ ಎಂದು ಹೇಳಬಹುದು.

ಯೋಜನೆಗಳಿಗೂ ಸಹ ವಾರ್ಷಿಕ ಯೋಜನೆ, ಪಂಚವಾರ್ಷಿಕ ಯೋಜನೆ ಹೀಗೆ ಅವಧಿಯ ಆಧಾರದ ಮೇಲೆ ವಿಭಾಗಿಸಬಹುದು.

ಈ ಅವಧಿಯನ್ನು ಕಾರ್ಯಕ್ರಮಗಳಿಗೂ ಸಹ ಅನ್ವಯ ಪಡಿಸಬಹುದು ಜಾತ್ರೆ ಅಥವಾ ಯಾವುದೇ ಒಂದು ಫಂಕ್ಷನ್ ಗಳಿಗೂ ಸಹ ಈ ಅವಧಿಯನ್ನು ಅನ್ವಯಿಸಿಕೊಳ್ಳಬಹುದು.

ಅವಧಿವಿಭಾಗಉದಾಹರಣೆ
ದಿನದೈನಿಕ/ದಿನ ಪತ್ರಿಕೆವಿಜಯ ವಾಣಿ, ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ
ವಾರ / 7 ದಿನವಾರ ಪತ್ರಿಕೆಸುಧಾ, ತರಂಗ
ಪಕ್ಷ / 15 ದಿನಪಾಕ್ಷಿಕಬಾಲಮಂಗಳ
ತಿಂಗಳು / ಮಾಸಮಾಸ ಪತ್ರಿಕೆ / ಮಾಸಿಕಕಸ್ತೂರಿ
2 ತಿಂಗಳು ದ್ವೈಮಾಸಿಕ
3 ತಿಂಗಳು ತ್ರೈಮಾಸಿಕ
4 ತಿಂಗಳು ಚತುರ್ ಮಾಸಿಕ
6 ತಿಂಗಳು ಅರ್ಧವಾರ್ಷಿಕ
ವರ್ಷ / 12 ತಿಂಗಳು ವಾರ್ಷಿಕ
2 ವರ್ಷ ದ್ವೈವಾರ್ಷಿಕ
3 ವರ್ಷ ತ್ರೈವಾರ್ಷಿಕ
4 ವರ್ಷ ಚತುರ್ವಾರ್ಷಿಕ
5 ವರ್ಷ ಪಂಚವಾರ್ಷಿಕ
10 ವರ್ಷ ದಶ ವಾರ್ಷಿಕ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.