ಸೆಪ್ಟೆಂಬರ್ 4, 2020

ಏಟಿಎಂ ಗಳಲ್ಲಿ ಕನ್ನಡದ ಹಣೆಬರಹ

ಸ್ನೇಹಿತರಿಗೆ ಹಂಚಿಕೊಳ್ಳಿ

ಮೊನ್ನೆ ಬೆಂಗಳೂರಿನಲ್ಲಿ ಏಟಿಎಂ ಹಲ್ಲೆ ಘಟನೆ ನಂತರ ಪೋಲಿಸರು ಸಾವಿರಾರು ಏಟಿಎಂಗಳನ್ನು ಮುಚ್ಚಿಸಿದರು. ಹಲವಾರು ಏಟಿಎಂ ಗಳ ಮೇಲೆ ಇದನ್ನು ಸುರಕ್ಷತೆ ಕಾರಣದಿಂದ ಮುಚ್ಚಲಾಗಿದೆ ಎಂದು ಇಂಗ್ಲೀಷ್ ಅಲ್ಲಿ ಮಾಹಿತಿ ಬರೆದಿದ್ದರು. ಆದರೆ ಕನ್ನಡದಲ್ಲಿ? ಉಹೂಂ ನಾನಂತೂ ನೋಡಿಲ್ಲ. ಇಷ್ಟೇ ಯಾಕೆ. ಅಕಸ್ಮಾತ್ ಏಟಿಎಂ ಅಲ್ಲಿ ಹಣ ಇಲ್ಲದಿದ್ದರೂ ಅಥವಾ ಕೆಲಸ ಮಾಡುತ್ತಿಲ್ಲವಾದರೂ ಕನ್ನಡದಲ್ಲಿ ಬರೆದಿರುವದಿಲ್ಲ. NO CASH ಅಥವಾ NOT WORKING ಎಂದು ಬೋರ್ಡ್ ಹಾಕಿರುತ್ತಾರೆ.

ನನ್ನ ಪ್ರಶ್ನೆ ಇಷ್ಟೇ ಕನ್ನಡ ಶಾಸ್ತ್ರೀಯ ಭಾಷೆ ಆಗಿಲ್ಲ ಎಂದು ಮೊಸಳೆ ಕಣ್ಣೀರು ಸುರಿಸುತ್ತಾ ಧರಣಿ, ಲಾಬಿ ಮಾಡಿದ ನಾವು ಇಂತಹ ಕಡೆ ಕನ್ನಡ ಬಳಕೆ ಆಗದಿದ್ದಾಗ ಯಾಕೆ ಧರಣಿ ಕೂರುವದಿಲ್ಲ? ರಾಜಕೀಯ ಅಥವಾ ಹಣದ ಲಾಭ ಇಲ್ಲವೆಂದೇ? ಎಲ್ಲೋ ಒಂದು ಹಿಂದಿ ಬೋರ್ಡ್ ಇದ್ದಿದ್ದರೆ ಆ ಏಟಿಎಂ ಅನ್ನು ಒಡೆದು ಬಿಡುತ್ತಿದ್ದರೇನೋ. ಆದರೆ ಕನ್ನಡಕ್ಕೆ ಬದಲಾಗಿ ಬರೀ ಇಂಗ್ಲೀಷ್ ಅಲ್ಲಿ ಮಾಹಿತಿ ನೀಡಿದಾಗ ಸುಮ್ಮನಿರುತ್ತೇವೆ. ರಾಜಕೀಯ ಅಥವಾ ಹಣದ ಲಾಭವಿಲ್ಲವೆಂದೆ?

ಇನ್ನು ಏಟಿಎಂ ಅಲ್ಲಂತೂ ಹೆಚ್ಚಿನ ಕಡೆ ಕನ್ನಡ ಇಂಟರ್ಫೇಸ್ ಇರುವದಿಲ್ಲ. ಬೆರಳೆಣಿಕೆ ಕಡೆ ಇದ್ದರೂ ಕೆಟ್ಟ ಭಾಷಾಂತರದ ಸಮಸ್ಯೆ. ಅದಕ್ಕಿಂತ ಇಂಗ್ಲೀಷ್ ಅಲ್ಲಿ ಓದಿದರೆ ಬೇಗ ಅರ್ಥ ಆಗುತ್ತದೆ. ಉದಾಹರಣೆಗೆ Collect your cash ಎಂಬುದನ್ನು “ನಿಮ್ಮ ನಗದು ಪಡೆದುಕೊೞಿ” ಎಂದು ಕೆಟ್ಟದಾಗಿ ಭಾಷಾಂತರಿಸಿರುತ್ತಾರೆ. “ನಿಮ್ಮ ಹಣ ತೆಗೆದುಕೊೞಿ” ಎಂದು ಜನರಿಗೆ ಅರ್ಥವಾಗುವಂತೆ ಬರೆದಿದ್ದರೆ ಎಷ್ಟು ಚೆನ್ನಾಗಿರುತಿತ್ತು? ಅಲ್ವಾ? ಕನ್ನಡಿಗರಿಗೆ ಹಣ ಎಂದರೆ ಕೂಡಲೆ ನೆನಪಿಗೆ ಬರುವದು ಕ್ಯಾಶ್ ಹೊರತು ಕ್ರೆಡಿಟ್ ಕಾರ್ಡ್, ಚೆಕ್ ಅಲ್ಲ. ಇದು ಬರಿ ಬೆಂಗಳೂರಿನ ಕಥೆ ಅಲ್ಲ. ಇಡೀ ಕರ್ನಾಟಕದಲ್ಲಿರುವ ಏಟಿಎಂ ಗೆ ಹೋದರೆ ನೋಡ ಸಿಗುವದು.

ಇಂದು ಕನ್ನಡಿಗರು ಮಕ್ಕಳಿಗೆ ಕನ್ನಡ ಕಲಿಸಲು ಆಸಕ್ತಿ ತೋರಿಸದಿರಲು, ಇತರ ಭಾಷಿಕರು ಮಕ್ಕಳಿಗೆ ಇಂಗ್ಲೀಷ್ ಮಾತ್ರ ಕಲಿಸಲು ಇಂತಹ ಘಟನೆಗಳ ಮುಖ್ಯ ಕಾರಣ. ಇಂತಹ ಸಾವಿರಾರು ಘಟನೆಗಳು ಕನ್ನಡವನ್ನು ದಿನಬಳಕೆಯಿಂದ ದೂರ ಮಾಡುತ್ತಿದೆ. ಕನ್ನಡಿಗರಿಗೆ ಭಾಷೆಯ ಮೇಲೆ ಅಭಿಮಾನವಿಲ್ಲವೆಂದು ಹೇಳುವ ಮುನ್ನ ಇಂತಹ ಕಡೆ ಕನ್ನಡ ಬಳಕೆ ಹೆಚ್ಚಿಸಬೇಕು. ಅಷ್ಟೇ ಅಲ್ಲ ಸರಿಯಾದ ಸುಲಭವಾಗಿ ಅರ್ಥ ಆಗುವ ಕನ್ನಡ ಬಳಸಬೇಕು. ಏನಂತೀರಾ? ಈ ಲೇಖನಕ್ಕೆ ಕನ್ನಡದಲ್ಲಿ ಟೈಪ್ ಮಾಡಿ ಅನಿಸಿಕೆ ವ್ಯಕ್ತಪಡಿಸುವದು ಕಷ್ಟ ಅಂತೀರಾ? ಇಂಗ್ಲೀಷ್ ಅಲ್ಲೇ ಮಾಡಿ ಪರವಾಗಿಲ್ಲ!!

ಚಿತ್ರ ಕೃಪೆ: https://www.thenewsminute.com/article/did-media-lie-about-currency-woes-bluru-man-checks-23-atms-find-out-53180

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.