ಸೆಪ್ಟೆಂಬರ್ 4, 2020

ಸಂಬಂಧಿತ ದಿಕ್ಕುಗಳು

ಸ್ನೇಹಿತರಿಗೆ ಹಂಚಿಕೊಳ್ಳಿ

ಒಂದು ವ್ಯಕ್ತಿ, ವಸ್ತು ಅಥವಾ ಸ್ಥಳಕ್ಕೆ ಸಂಬಂಧಿಸಿದ ಹಾಗೆ ಕಾಣಿಸುವ ದಿಕ್ಕುಗಳನ್ನು ಸಂಬಂಧಿತ ದಿಕ್ಕು ಅಂತ ಕರೆಯಬಹುದು. ಇದು ಸಂಪೂರ್ಣವಾಗಿ ಆಯಾ ವ್ಯಕ್ತಿ, ವಸ್ತು ನಿಂತಿರುವ ದಿಕ್ಕಿನ ಮೇಲೆ ಅವಲಂಭಿಸಿರುತ್ತದೆ.

  • ಎಡ
  • ಬಲ
  • ಮುಂದೆ
  • ಹಿಂದೆ
  • ಮೇಲೆ
  • ಕೆಳಗೆ

ಇಬ್ಬರು ವ್ಯಕ್ತಿಗಳು ಬೇರೆ ಬೇರೆ ದಿಕ್ಕಿನಲ್ಲಿ ನಿಂತಿದ್ದರೆ ಅದಕ್ಕೆ ಅನುಗುಣವಾಗಿ ಅವರ ಸಂಬಂಧಿತ ದಿಕ್ಕುಗಳು ಬದಲಾಗುತ್ತದೆ. ವಸ್ತು, ವ್ಯಕ್ತಿ ಹಾಗೂ ಸ್ಥಳದ ಮುಂಭಾಗ ಗುರುತಿಸಲು ಸಾಧ್ಯವಿದ್ದರೆ ಮಾತ್ರ ಎಡ, ಬಾಲ ಹಾಗೂ ಹಿಂಭಾಗ ಗುರುತಿಸಬಹುದು. ಇಲ್ಲದಿದ್ದರೆ ಆಗದು.
ಸಂಬಂಧಿತ ದಿಕ್ಕುಗಳು ಭೂಮಿಯ ದಿಕ್ಕುಗಳ ಮೇಲೆ ಆಧಾರಿತವಾಗಿಲ್ಲ. ವಸ್ತು ಅಥವಾ ವ್ಯಕ್ತಿ ಉತ್ತರಕ್ಕೆ ಇರಲಿ ಅಥವಾ ದಕ್ಷಿಣಕ್ಕೆ ಮುಖ ಮಾಡಿರಲಿ ಅದರ ಸಂಬಂಧಿತ ದಿಕ್ಕುಗಳು ಬದಲಾಗುವುದಿಲ್ಲ.
ಅಕಸ್ಮಾತ್ ನಿರ್ಧಿಷ್ಟ ದಿಕ್ಕು ಅಗತ್ಯ ವಿಲ್ಲದಿದ್ದರೆ ಅಕ್ಕ-ಪಕ್ಕ, ಆಜು-ಬಾಜೂ ಅಥವಾ ಸುತ್ತ-ಮುತ್ತ ಎನ್ನಬಹುದು. ಇದು ಆ ವ್ಯಕ್ತಿ, ಸ್ಥಳ ಅಥವಾ ವಸ್ತುವಿನ ಸುತ್ತಲಿನ ಎಲ್ಲ ಸಂಬಂಧಿತ ದಿಕ್ಕುಗಳನ್ನು ಸೂಚಿಸುತ್ತದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.