ಸೆಪ್ಟೆಂಬರ್ 4, 2020

ಅವನು

ಸ್ನೇಹಿತರಿಗೆ ಹಂಚಿಕೊಳ್ಳಿ

अवनु (कन्नडा) – मतलब: वह / वो

Avanu (kannada) – Meaning: He

ಮೂಲ: ಕನ್ನಡ

ಲಿಂಗ: ಪುಲ್ಲಿಂಗ

ಅರ್ಥ

ಸರ್ವನಾಮ: ಒಬ್ಬ ಹುಡುಗ ಅಥವಾ ಪುರುಷ, ಗಂಡಸನ್ನು ಉಲ್ಲೇಖಿಸುವಾಗ, ಈಗಾಗಲೇ ಹೇಳಿರುವ ಹುಡುಗ, ಪುರುಷ, ಗಂಡಸು ಅಥವಾ ಗಂಡು ಪ್ರಾಣಿಯ ಉಲ್ಲೇಖಿಸಿ ಈ ಪದ ಬಳಸುತ್ತಾರೆ. ಇದು ಏಕವಚನ ಅಂದರೆ ಒಬ್ಬ ಹುಡುಗ ಅಥವಾ ಕಿರಿಯ ಪುರುಷನನ್ನು ಸಂಭೋದಿಸಿ ಹೇಳುವಂತದ್ದು. ಸಾಮಾನ್ಯವಾಗಿ ಹಿರಿಯರಿಗೆ ಬಹುವಚನ ಪದ ಅವರು ಬಳಸುತ್ತಾರೆ. ಈ ಪದವನ್ನು ಆ ಸಂಭೋದಿತ ವ್ಯಕ್ತಿ ದೂರದಲ್ಲಿದ್ದರೆ ಮಾತ್ರ ಬಳಸುತ್ತಾರೆ. ಪಕ್ಕದಲ್ಲೇ ಉಲ್ಲೇಖಿಸುತ್ತಿರುವವರು ಇದ್ದರೆ ಇದನ್ನು ಬಳಸುವದಿಲ್ಲ ಬದಲಾಗಿ ಇವನು ಎನ್ನುತ್ತಾರೆ.

ಸರ್ವನಾಮ ಉದಾಹರಣೆಗಳು

  • ಅವನು ಶ್ಯಾಮ.
  • ಯಾರು ಎಲ್ಲ ಪರೀಕ್ಷೆಯಲ್ಲಿ ಪಾಸಾಗುತ್ತಾನೋ ಅವನು ಬಹುಮಾನ ಗೆಲ್ಲುತ್ತಾನೆ.
  • ನನ್ನ ಗೆಳೆಯ ಭೀಮ. ಅವನು ತುಂಬಾ ಬುದ್ಧಿವಂತ.
  • ಅವನು ಯಾರು ಎಂಬುದು ನನಗೆ ಗೊತ್ತಿಲ್ಲ.

ಇದೇ ಅರ್ಥ ಇರುವ ಪದಗಳು

ಆತ, ಆತನು

ವಿರುದ್ಧ ಅರ್ಥ ಇರುವ ಪದಗಳು

ಮಾಹಿತಿ ಇಲ್ಲ.

ಏಕವಚನ

ಅವನು ಎಂಬುದು ಏಕ ವಚನ ಪದ. ಚಿಕ್ಕವರಿಗೆ, ಸ್ನೇಹಿತರಿಗೆ, ತೀರಾ ಆತ್ಮೀಯರಿಗೆ ಸಂಭೋದಿಸಲು ಇದು ಸೂಕ್ತ.

ಬಹುವಚನ

ಅವರು ಎಂಬುದು ಬಹುವಚನ ಪದ. ದೊಡ್ಡವರಿಗೆ, ಗುರುಗಳಿಗೆ, ದೇವರಿಗೆ, ಹಿರಿಯರಿಗೆ ಸಂಭೋದಿಸಲು ಇದು ಸೂಕ್ತ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Comment moderation is enabled. Your comment may take some time to appear.