ನೀವು 33 ಸಾವಿರ ಒಳಗೆ ಉತ್ತಮ 55 ಇಂಚಿನ ನಾಲ್ಕು ಕೆ(4K) ಟಿವಿ ಹುಡುಕುತ್ತಿದ್ದೀರಾ? ನಿಮಗೆ ಹಣಕ್ಕೆ ತಕ್ಕ ಮೌಲ್ಯ ಬೇಕೆ? ಭಾರತದಲ್ಲಿಯೇ ತಯಾರಿಸಿದ ಟಿವಿ ಬೇಕೆ? ಹಾಗಾದರೆ ಮುಂದೆ ಓದಿ?
ಭಾರತದ ಸೂಪರ್ ಪ್ಲಾಸ್ಟ್ರೋನಿಕ್ಸ ಪ್ರೈವೇಟ್ ಲಿಮಿಟೆಡ್ ಫ್ರಾನ್ಸಿನ ಥಾಮ್ಸನ್ ಟಿವಿ ಯ ಲೈಸೆನ್ಸ್ ಪಡೆದು ಭಾರತದಲ್ಲಿ ಟಿವಿ ತಯಾರಿಸುತ್ತದೆ. ಈ ಟಿವಿ ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿದೆ.
ನೀವು ಉತ್ತಮ ಗುಣಮಟ್ಟದ ಫೋರ್ ಕೇಟಿವಿ ಯೂಟ್ಯೂಬ್, ಅಮೆಜಾನ್ ಪ್ರೈಮ್, ನೆಟ್ಫ್ಲಿಕ್ಸ್ ಮೊದಲಾದ ಅಪ್ಲಿಕೇಶನ್ ಇರುವ ಟಿವಿ ಹುಡುಕುತ್ತಿದ್ದರೆ ಈ ಟಿವಿ ಓಕೆ. ಆದರೆ ನೀವು ವಿಡಿಯೋ ಗೇಮ್ ಆಡಲು, ತುಂಬಾ ಜಾಸ್ತಿ ಅಪ್ಲಿಕೇಶನ್ ಬಳಸಲು ಉಪಯೋಗಿಸುವರಾಗಿದ್ದರೆ ಇದರ ಮೆಮರಿ ಕಡಿಮೆಯಾದೀತು.

ಪರದೆ
ಈ ಟಿವಿಯ ಪ್ಯಾನಲ್ ಎಲ್ಇಡಿ ಆಗಿದ್ದು ಐಪಿಎಸ್ ತಂತ್ರಜ್ಞಾನ ಹೊಂದಿದೆ. ಆದ್ದರಿಂದ ಓರೆಯಾಗಿ ನೋಡಿದರೂ ಚಿತ್ರ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಈ ಪ್ಯಾನಲ್ ಎಲ್ಇಡಿ ಬ್ಯಾಕ್ ಲೈಟ್ ಓರೆಯಾಗಿ ನೋಡುವಾಗ ಕಾಣಿಸುತ್ತದೆ. ಈ ಎಲ್ಇಡಿ ತಂತ್ರಜ್ಞಾನದ ಪ್ಯಾನಲ್ ಅಲ್ಲಿ ಕಪ್ಪು ಬಣ್ಣ ತೀರಾ ಓರೆಯಾಗಿ ನೋಡಿದರೆ ಬ್ಯಾಕ್ ಲೈಟ್ ಕಾರಣ ಕಪ್ಪಾಗಿ ಕಾಣಿಸದು. ಆದರೂ ನಾವು ಕೊಡುವ ಹಣಕ್ಕೆ ಉತ್ತಮ ಪರದೆ ಎಂದು ಹೇಳಬಹುದು.
ಪರದೆ ಬ್ರೈಟ್ನೆಸ್ 550 ನಿಟ್ಸ್ ಆಗಿದ್ದು ಉತ್ತಮವಾಗಿ ಪರದೆ ಮೇಲೆ ನಾಲ್ಕು ಕೆ ಹಾಗೂ ಫುಲ್ ಎಚ್ಡಿ ವಿಡಿಯೋ ಗಳು ಚೆನ್ನಾಗಿ ಮೂಡುತ್ತದೆ.
ಸ್ಟಾಂಡರ್ಡ್ ಡೆಫಿನೇಶನ್ ಚಾನಲ್ಗಳ ಅಪ್ ಸ್ಕೇಲ್ ಪರವಾಗಿಲ್ಲ. ಆದರೆ ಕೆಲವು ಕಡೆ ಡಿಥರಿಂಗ್ ಸಮಸ್ಯೆ ಇದೆ. ಹೆಚ್ಚಿನ ಬೆಲೆಯ ಟಿವಿಗಳು ಈ ಕೆಲಸವನ್ನು ಇನ್ನು ಚೆನ್ನಾಗಿ ಮಾಡುತ್ತವೆ. ಆದರೆ ಈ ಟಿವಿ ಕೊಡುವ ಹಣಕ್ಕೆ ತಕ್ಕ ಮೌಲ್ಯ ಅದರಲ್ಲಿ ಎರಡು ಮಾತಿಲ್ಲ.

ಈ ಟಿವಿ 10ಬಿಟ್ ನ ಪರದೆ ಹೊಂದಿದ್ದು ಬಣ್ಣವನ್ನು ನಿಖರವಾಗಿ ಮೂಡಿಸುತ್ತದೆ. ಈ ಟಿವಿ ಅಡ್ಡಿಯೂ 10 ಮತ್ತು ಡಾಲ್ಬಿ ವಿಷನ್ ತಂತ್ರಜ್ಞಾನವನ್ನು ಹೊಂದಿದೆ. ಚಿತ್ರಗಳು ಸ್ಪಷ್ಟವಾಗಿ ಮೂಡುತ್ತದೆ.

ಸೌಂಡ್
ಈ ಟಿವಿ ಡಾಲ್ಬಿ ಡಿಜಿಟಲ್ ಹಾಗೂ ಡಿಟಿಎಸ್ ಸೌಂಡ್ ಬೆಂಬಲ ಹೊಂದಿದೆ. 30 ವ್ಯಾಟಿನ ಸ್ಪೀಕರ್ ಉತ್ತಮ ಗುಣಮಟ್ಟದ ಶಬ್ದ ಉತ್ಪತ್ತಿ ಮಾಡುತ್ತದೆ. ಗೋಡೆಯ ಮೇಲೆ ನೇತು ಹಾಕಿದರೆ ಉತ್ತಮ.
ಸಾಫ್ಟವೇರ್
ಇದು ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ 9ರ ಮೇಲೆ ಆಧಾರಿತವಾಗಿದ್ದು ಗೂಗಲ್ ಅಸಿಸ್ಟೆಂಟ್ ಹಾಗೂ ಕ್ರೋಮ್ ಕಾಸ್ಟ್ ಸೌಲಭ್ಯ ಇದೆ. ಮೊಬೈಲ್ ಫೋನ್ ಬಳಸಿ ಸ್ಕ್ರೀನ್ ಹಂಚಿದಾಗ ವಿಡಿಯೋ ಪ್ಲೇ ಕೆಲವೊಮ್ಮೆ ಪ್ರೀಜ್ ಆಗುತ್ತೆ. ಇದು ನಮ್ಮ ಅನುಭವ.
ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್, ಯೂಟ್ಯೂಬ್, ಸೋನಿ ಲೈವ್, ಹಾಟ್ ಸ್ಟಾರ್ ಹೀಗೆ ಎಲ್ಲ ಅಪ್ಲಿಕೇಶನ್ ಕೆಲಸ ಮಾಡುತ್ತದೆ.
ಈ ಟಿವಿ ಪ್ರಾಸೆಸರ್ ಪವರ್ ಫುಲ್ ಆಗಿಲ್ಲ. ಮೆಮರಿ ಕಡಿಮೆ. ಗೇಮ್ ಆಡಲು ಉತ್ತಮ ಅಲ್ಲ.

ಸಂಪರ್ಕ
ವೈ ಫೈ, ಈಥರ್ ನೆಟ್, ಯುಎಸ್ ಬಿ (2), ಎಚ್ ಡಿ ಎಂ ಐ(3) ಎಲ್ಲ ಇದೆ.
ಕೊನೆ ಮಾತು
ಒಟ್ಟಿನಲ್ಲಿ Thomson OATHPRO 2000 (ಥಾಮ್ಸನ್ ಓತ್ ಪ್ರೋ 2000) ಒಂದು ಅತ್ಯುತ್ತಮ ಬಜೆಟ್ ಟಿವಿ. ಕೊಟ್ಟ ಹಣಕ್ಕೆ ಮೋಸವಿಲ್ಲ. ಇದರ ಪರದೆ, ಶಬ್ದ ನಿರಾಸೆ ಮಾಡದು. ಚಕಿತಗೊಳಿಸುತ್ತದೆ. ದೊಡ್ಡ ಹಾಲ್ ಗೆ 55″ ಅಥವಾ 65″ ಇಂಚಿನ ಟಿವಿ ಒಳ್ಳೆಯದು.
